
ಕೋಲಾರ: ತಾಲ್ಲೂಕಿನ ದೇವರಾಯ ಸಮುದ್ರ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಹತ್ತನೇ ತರಗತಿಯಲ್ಲಿ 100% ಫಲಿತಾಂಶ ಸಾಧಿಸಿದೆ.

j3tvkannada
ಪರೀಕ್ಷೆಗೆ ಕುಳಿತಿದ್ದ 43 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 27 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗುವ ಮೂಲಕ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಪ್ರಾಂಶುಪಾಲ ನವೀದ್ ತಿಳಿಸಿದರು.
ಟಿ.ಎಸ್.ಸಹನಾ 594/625 (95.04%), ಎನ್.ವಿನೋದ್ ಕುಮಾರ್ 579(92.64%), ಜೆ.ಮೇಗನಾ 572 (91.52%), ಮಹೇಶ 572 (91.52%), ಹಾಗೂ ಕೆ.ಸಿ. ನಂದಿನಿ 569 (91.04) ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ದರ್ಜೆಯಲ್ಲಿ ಪಾಸಾಗಿದ್ದಾರೆ. 6 ವಿದ್ಯಾರ್ಥಿಗಳು ಶೇಕಡಾ 90ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.