
ಬಳ್ಳಾರಿ: ರೈತರ ಏಳಿಗೆಗಾಗಿ ಸರ್ಕಾರ ನೀಡುವ ಗಂಗಾ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಶಾಸಕ ಬಿ.ಎಂ. ನಾಗರಾಜ ಹೇಳಿದರು.

j3tvkannada
ನಗರದ ತಾಲ್ಲೂಕು ಮೈದಾನದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2021-22 ಮತ್ತು 2022-23ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯ ₹2.5ಲಕ್ಷ ಸಹಾಯ ಧನದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರ ಫಲಾನುಭವಿಗಳಿಗೆ ವಿವಿಧ ಸಾಮಗ್ರಿಗಳನ್ನು ಶುಕ್ರವಾರ ವಿತರಿಸಿ ಮಾತನಾಡಿದರು. 58 ರೈತರಿಗೆ ಪಂಪ್ಸೆಟ್, ಪೈಪ್ಗಳು, ವಿದ್ಯುತ್ ಉಪಕರಣಗಳಿಂದ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲು ಸಾಮಗ್ರಿ ನೆರವಾಗಲಿವೆ ಎಂದರು.
ನಗರಸಭೆ ಅಧ್ಯಕ್ಷೆ ರೇಣುಕಮ್ಮವೆಂಕಟೇಶ್, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನಿಯಮಿತ ಜಿಲ್ಲಾ ವ್ಯವಸ್ಥಾಪಕ ಎಚ್. ಮಲ್ಲಿಕಾರ್ಜುನ, ತಾಲ್ಲೂಕು ಅಧಿಕಾರಿ ರೇವಣ್ಣ ಸಿದ್ದಪ್ಪ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ, ನಗರಸಭೆ ಸದಸ್ಯ ಗಣೇಶ್ ಇನ್ನಿತರು ಇದ್ದರು.