ಪುನೀತ್ ರಾಜ್ಕುಮಾರ್ ರವರು 17 ಮಾರ್ಚ್ 1975 ರಲ್ಲಿ ಜನಿಸಿದರು. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಹಿನ್ನೆಲೆ ಗಾಯಕ, ಚಲನಚಿತ್ರ ನಿರ್ಮಾಪಕರಾಗಿಯೂ, ಕಾರ್ಯ ನಿರ್ವಹಿಸಿದರು. ಹಾಗೂ ಪ್ರಸಿದ್ಧ ನಟ ಮತ್ತು ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜ್ಕುಮಾರ್ ರವರ ಕಿರಿಯ ಪುತ್ರ. ಪುನೀತ್ ರಾಜ್ಕುಮಾರ್ ರವರು ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಪುನೀತ್ ರವರು 32 ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡರು.
ಬಾಲ ಕಲಾವಿದನಾಗಿ 12 ಚಿತ್ರಗಳಲ್ಲಿ ನಟಿಸಿದ್ದಾರೆ."ಬೆಟ್ಟದ ಹೂವು" ಚಿತ್ರಕ್ಕಾಗಿ ಅವರು ಅತ್ಯುತ್ತಮ ಬಾಲ ನಟ"ರಾಷ್ಟ್ರ ಪ್ರಶಸ್ತಿ"ಯನ್ನು ಗೆದ್ದಿದ್ದಾರೆ. ಅಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಬೆಟ್ಟದ ಹೂವು, ಭಾಗ್ಯವಂತ, ವಸಂತ ಗೀತೆ, ಛಲಿಸುವ ಮೋಡಗಳು, ಎರಡು ನಕ್ಷತ್ರಗಳು ಚಿತ್ರಗಳಲ್ಲಿ ಪುನೀತ್ ಅವರ ಚಿಕ್ಕ ಮಗುವಿನ ನಟನೆ ಮೆಚ್ಚುಗೆಗೆ ಪಾತ್ರವಾಯಿತು.

ಸ್ಯಾಂಡಲ್ವುಡ್ನ ಪ್ರೀತಿಯ ನಟ ಪುನೀತ್ ರಾಜ್ಕುಮಾರ್ ಅಕಾಲಿಕವಾಗಿ ನಿಧನರಾಗಿ ಇಂದಿಗೆ ಮೂರು ವರ್ಷಗಳಾದರೂ, ಅವರ ಉಪಸ್ಥಿತಿಯನ್ನು ಅವರ ಅಭಿಮಾನಿಗಳು ಮತ್ತು ಕನ್ನಡ ಚಲನಚಿತ್ರೋದ್ಯಮವು ಆಳವಾಗಿ ಅನುಭವಿಸುತ್ತಲೇ ಇದೆ. ‘ಅಪ್ಪು’ ಎಂದು ಪ್ರೀತಿಯಿಂದ ಕರೆಯಲ್ಪಡುವ ಪುನೀತ್, ತಮ್ಮ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ.

“ಅಶ್ವಿನಿ ಪುನೀತ್ ರಾಜ್ಕುಮಾರ”ರವರು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ, ಪುನೀತ್ ರಾಜ್ಕುಮಾರ್ ರವರ 50 ನೇ ಹುಟ್ಟುಹಬ್ಬದ ಸಲುವಾಗಿ ʼಅಪ್ಪುʼ ಚಲನಚಿತ್ರವು ಮಾರ್ಚ್ 14, 2025 ರಂದು ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಖಚಿತಪಡಿಸಿದ್ದಾರೆ.