
ತುಮಕೂರು: ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಮಾರಾಟವು ದಾಖಲೆ ನಿರ್ಮಿಸಿದೆ. ಉಂಡೆ ಕೊಬ್ಬರಿಯ ದರ ಕ್ವಿಂಟಾಲ್ಗೆ ರೂ 24, 129ಕ್ಕೆ ಮಾರಾಟವಾಗಿದೆ. ಜೂನ್ 9 ರಂದು ಕ್ವಿಂಟಾಲ್ನ ಗರಿಷ್ಟ ಬೆಲೆ ರೂಪಾಯಿ 22,356 ಇತ್ತು. ಅನಂತರ ಅರಸೀಕೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ರೂ 23 ಸಾವಿರಕ್ಕೆ ಏರಿಕೆಯಾಗಿತ್ತು.

j3tvkannada.in
ತಿಪಟೂರು ಎಪಿಎಂಸಿ ಮಾರುಕಟ್ಟೆಲ್ಲಿ 3,028 ಕ್ವಿಂಟಾಲ್(7,043 ಚೀಲ) ಉಂಡೆ ಕೊಬ್ಬರಿ ಆವಕವಾಗಿದ್ದು, ಕನಿಷ್ಟ ಬೆಲೆ ರೂ 21 ಸಾವಿರವಾಗಿತ್ತು. ಮಾದರಿ ಬೆಲೆ ರೂ 23,850ಕ್ಕೆ ಮಾರಾಟವಾಗಿದೆ.
ಕಳೆದ ಮಾರ್ಚಿನಿಂದ ಕೊಬ್ಬರಿ ಬೆಲೆ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಕುಗ್ಗಿದ ಆವಕ, ಹೆಚ್ಚಿದ ಬೇಡಿಕೆ ಹರಾಜು ಪ್ರಕ್ರಿಯೆ ಮುಂತಾದ ಬದಲಾವಣೆಯಿಂದ ಬೆಲೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ಅಧಿಕಾರಿಗಳು. ಹಿಂದಿನ ವರ್ಷಕ್ಕೆ ಹೋಲಿಸಿ ನೋಡಿದರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಆವಕ ಕುಸಿದಿದೆ. 2024ರ ಜೂನ್ನಲ್ಲಿ ಸರಾಸರಿ ಕ್ವಿಂಟಾಲ್ ದರ 26,053 ರೂಪಾಯಿ ಇತ್ತು ಎನ್ನಲಾಗಿದೆ.