
ಉಡುಪಿ : ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಎರಡು ರೈಲುಗಳಿಗೆ ತಾತ್ಕಾಲಿಕ ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಣೆಗಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ಎರಡು ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಕೆಎಸ್ಆರ್ ಬೆಂಗಳೂರು – ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಜೂನ್ 11ರಿಂದ ನವೆಂಬರ್ 1ರ ತನಕ ಹೆಚ್ಚುವರಿ ಬೋಗಿ ಸೇರಿಸಲಾಗುತ್ತಿದ್ದರೆ, ಕಾರವಾರ – ಮಡಗಾಂವ್ ಜಂಕ್ಷನ್ ರೈಲಿಗೂ ಜೂನ್ 12 ರಿಂದ ನವೆಂಬರ್ 2 ರ ತನಕ 5 ಹೆಚ್ಚಿನ ಬೋಗಿ ಅಳವಡಿಕೆ ಮಾಡಲಾಗುತ್ತಿದೆ.

ರೈಲು ಸಂಖ್ಯೆ 16595, 16596 ಕೆಎಸ್ಆರ್ ಬೆಂಗಳೂರು – ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಜೂನ್ 11ರಿಂದ ನವೆಂಬರ್ 1ರ ತನಕ ಹೆಚ್ಚುವರಿಯಾಗಿ 1 ಸ್ಲೀಪರ್ ಬೋಗಿ, ಎರಡು ಜನರಲ್ ಬೋಗಿ, 3 ಟಯರ್ ಎಸಿ ಎರಡು ಬೋಗಿ ಅಳವಡಿಸಲಾಗುತ್ತಿದ್ದು, ಒಟ್ಟು ಬೋಗಿಗಳ ಸಂಖ್ಯೆ 14 ರಿಂದ 19 ಕ್ಕೇರಲಿದೆ.
ರೈಲು ಸಂಖ್ಯೆ 01595, 01596 ಕಾರವಾರ – ಮಡಗಾಂವ್ ಜಂಕ್ಷನ್ ರೈಲು ಜೂನ್ 12 ರಿಂದ ನವೆಂಬರ್ 2 ರ ತನಕ 14 ಬೋಗಿಗಳ ಬದಲು 19 ಬೋಗಿಗಳೊಂದಿಗೆ ಸಂಚರಿಸಲಿದೆ.