

j3tvkannada
ಬೀದರ್: ಬಂಜಾರ ಸಮುದಾಯದ ಸಂಸ್ಕೃತಿ, ಪರಂಪರೆ ಸಾರುವ ಟ್ರೈಬಲ್ ಪಾರ್ಕ್ ಕಾಮಗಾರಿ ಮಂದಗತಿಯಿಂದ ಸಾಗಿದೆ. ೨೦೦ ಕೋಟಿ ರೂ. ವೆಚ್ಚದ ಬಂಜಾರ ಸಮುದಾಯದ ಆರ್ಥಿಕ, ಸಂಸ್ಕೃತಿ, ಉತ್ತೇಜಿಸುವ (ಟ್ರೈಬಲ್ ಪಾರ್ಕ್) ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿದೆ.
ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಹಳ್ಳ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ. ಬಂಜಾರಾ ಸಮುದಾಯದ ವಿಶಿಷ್ಟ ಉಡುಗೆ, ತೊಡುಗೆ, ನೃತ್ಯ, ಕಲೆಗಳನ್ನು ಸಂರಕ್ಷಿಸಿ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಬೋರಂಪಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಟ್ರೈಬಲ್ ಪಾರ್ಕ್ನ ಕಾಮಗಾರಿಗೆ ಹತ್ತು ವರ್ಷಗಳಿಂದ ಗ್ರಹಣ ಹಿಡಿದಿದೆ.