
ಬೆಂಗಳೂರು: ಬೆಂಗಳೂರು ನಗರದಲ್ಲಿ ಬೆಳಗ್ಗೆ 4 ಗಂಟೆಗೆ ಹವಾಮಾನ ಇಲಾಖೆ ಗುಡುಗು, ಗಾಳಿ ಸಹಿತ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಬೆಂಗಳೂರು ನಗರಕ್ಕೆ ನೀಡಿದ್ದು, ಮುಂಜಾನೆಯಿಂದಲೂ ಎಡೆಬಿಡದೆ ಮಳೆಯಾಗುತ್ತಿದೆ.

j3tvkannada
ಶನಿವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವು ರಸ್ತೆಗಳ, ಬಡಾವಣೆಗಳು ಜಲಾವೃತವಾಗಿದ್ದು ಪ್ರವಾಹ ಪರಿಸ್ಥಿತಿ ಇದೆ. ಮೇ 21 ರವರೆಗೆ ಕೂಡಾ ಗುಡುಗು ಮಳೆಯಾಗುವ ಮುನ್ಸೂಚನೆ ಇದೆ. ನಗರದ ರಸ್ತೆಗಳು ಪ್ರಯಾಣಕ್ಕೆ ಅಸಾಧ್ಯ ಅನ್ನುವ ರೀತಿ ನೀರು ತುಂಬಿಕೊಳ್ಳುತ್ತಿದೆ. ದಿನವಿಡೀ ಚಳಿಯ ವಾತಾವರಣ ಇರಲಿದೆ.
ಐಟಿ ಕಚೇರಿಗಳಿಗೆ ವರ್ಕ್ ಫ್ರಾಂ ಹೋಂ:-
ಮಾನ್ಯತಾ ಟೆಕ್ಪಾರ್ಕ್ನಲ್ಲಿ ನೀರು ನುಗ್ಗಿ ಸಮಸ್ಯೆ ಆಗಿರುವುದರಿಂದ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಇನ್ನು ಎಲೆಕ್ಟ್ರಾನಿಕ್ ಸಿಟಿ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತ ಹಾಗೂ ಮಾರತ್ಹಳ್ಳಿ ರಿಂಗ್ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾದ ಹಿನ್ನಲೆ ಹಲವು ಐ.ಟಿ ಬಿ.ಟಿ ಕಚೇರಿಗಳಿಗೆ 2 ದಿನ ವರ್ಕ್ ಫ್ರಾಂ ಹೋಮ್ ನೀಡಲಾಗಿದೆ. ಶಾಲೆ ಕಾಲೇಜುಗಳಿಗೆ ಸದ್ಯ ಬೇಸಿಗೆ ರಜೆ ಇರುವ ಹಿನ್ನಲೆ ಮೇ 29 ರವರೆಗೆ ರಜೆ ಮುಂದುವರಿಯಲಿದೆ.