
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳ ಮೇಲಿನ ಅತಿಯಾದ ಜಾಹೀರಾತುಗಳು ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿವೆ. ಬಸ್ನ ಹೊರ ಭಾಗ ಮತ್ತು ಕಿಟಕಿಗಳ ಮೇಲಿನ ಜಾಹೀರಾತುಗಳಿಂದಾಗಿ ಪ್ರಯಾಣಿಕರಿಗೆ ನಿಲ್ದಾಣಗಳು ಮತ್ತು ಸ್ಥಳಗಳನ್ನು ಗುರುತಿಸಲು ಕಷ್ಟವಾಗುತ್ತಿದೆ.

j3tvkannada
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಬಿ.ಎಂ.ಟಿ.ಸಿ ಜನರ ಸೇವೆಗಿಂತ ಆದಾಯವೇ ಮುಖ್ಯವಾಯ್ತಾ ಒಂದಲ್ಲಾ ಎರಡಲ್ಲಾ ನಿತ್ಯ 40 ಲಕ್ಷ ಪ್ರಯಾಣಿಕರಿಗೆ ಬಿ.ಎಂ.ಟಿ.ಸಿಯಿಂದ ಕಿರಿಕಿರಿ ಅನಿಸುತ್ತಿದೆ. ಅದಕ್ಕೆ ಕಾರಣ ಬಸ್ಗಳ ಮೇಲಿರುವ ಜಾಹೀರಾತು.
ಬಸ್ ಗಳ ಮೇಲಿನ ಆ್ಯಡ್ ನಿಂದ ಪ್ರಯಾಣಿಕರಿಗೆ ಬಾರಿ ತಲೆನೋವಾಗ್ತಿದೆ. ಬಸ್ ಯಾವ ಸೈಡ್ ನೋಡಿದ್ರೂ ಜಾಹೀರಾತಿನದ್ದೇ ಕಾರುಬಾರಾಗಿದ್ದು, ಬಿ.ಎಂ.ಟಿ.ಸಿ ಜಾಹೀರಾತು ಪ್ರಯಾಣಿಕರ ಆಕ್ಷೇಪಕ್ಕೆ ಕಾರಣವಾಗಿದೆ.