
ಮೈಸೂರು: ನಗರದಲ್ಲಿ ಪೊಲೀಸ್ ಇಲಾಖೆಯು ಕಾರು ಚಾಲಕರಿಗೆ ಕೂಲಿಂಗ್ ಕವರ್ ಬಳಕೆಯನ್ನು ನಿಷೇಧಿಸಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದೆ. ಬೇಸಿಗೆಯ ಬಿಸಿಲಿನ ತಾಪವನ್ನು ಕಡಿಮೆ ಮಾಡಲು ಕಾರಿನ ಗಾಜುಗಳಿಗೆ ಕೂಲಿಂಗ್ ಕವರ್ಗಳನ್ನು ಹಾಕುವುದು ಸಾಮಾನ್ಯವಾಗಿದೆ. ಇದರಿಂದ ಕಾರಿನೊಳಗಿನ ತಾಪಮಾನ ಕಡಿಮೆಯಾಗಿ ಪ್ರಯಾಣಿಕರಿಗೆ ಆರಾಮದಾಯಕವಾಗಿರುತ್ತದೆ.

j3tvkananda
ಆದರೆ ಈ ಕವರ್ಗಳು ಕಾರಿನ ಒಳಗಿನ ದೃಶ್ಯವನ್ನು ಮರೆಮಾಚುವುದರಿಂದ ಭದ್ರತೆಗೆ ಧಕ್ಕೆಯುಂಟಾಗುತ್ತಿದೆ ಎಂದು ಕೂಲಿಂಗ್ ಕವರ್ ನಿಷೇಧ ಮಾಡಲಾಗಿದೆ. ಕೂಲಿಂಗ್ ಕವರ್ಗಳಿಂದ ಕಾರಿನ ಒಳಗಿನ ಚಟುವಟಿಕೆಗಳು ಹೊರಗಿನವರಿಗೆ ಕಾಣದಿರುವುದರಿಂದ ಕಳ್ಳತನ, ಕಿಡ್ನಾಪ್, ಅತ್ಯಾಚಾರ ಮುಂತಾದ ಅಪರಾಧಗಳಿಗೆ ಇದು ಸಹಕಾರಿಯಾಗಬಹುದು ಎಂಬ ಕಾರಣಕ್ಕೆ ಈ ನಿಷೇಧವನ್ನು ಜಾರಿಗೆ ತರಲಾಗಿದೆ. ಒಳಗಿನಿಂದ ಕೂಗಿದರೂ ಧ್ವನಿಯು ಹೊರಗೆ ಕೇಳದಿರುವುದರಿಂದ ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆಯು ಕಠಿಣ ಕ್ರಮಗಳನ್ನು ಘೋಷಿಸಿದೆ.