
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಬ್ಬರು ಗರ್ಭಿಣಿಯರು ಮತ್ತೋರ್ವ ಮಹಿಳೆ ಹಾಗೂ ಪುರಷ ಸೇರಿ 4 ಮಂದಿಗೆ ಕೋವಿಡ್ ಪಾಸಿಟಿವ್ ಧೃಡವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

j3tvkannada
ಗೌರಿಬಿದನೂರಿನ ಹಾಗೂ ಬಾಗೇಪಲ್ಲಿಯಲ್ಲಿ ತಲಾ ಒಬ್ಬರು ಗರ್ಭಿಣಿಯರು, ಚಿಂತಾಮಣಿಯಲ್ಲಿ 1 ಪ್ರಕರಣ, ಚಿಕ್ಕಬಳ್ಳಾಪುರ ನಗರದಲ್ಲಿ 1 ಪ್ರಕರಣ ಕಂಡುಬಂದಿದೆ. ಗೌರಿಬಿದನೂರಿನ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ಮೂವರು ಮನೆಯಲ್ಲೇ ಆರೋಗ್ಯವಾಗಿದ್ದಾರೆ ಎಂದು ಡಿ.ಹೆಚ್.ಒ ಮಾಹಿತಿ ನೀಡಿದ್ದಾರೆ.
ಇನ್ನೂ ಮೋಡ ಮುಚ್ಚಿದ ವಾತವಾರಣ ಇರೋದ್ರಿಂದ ಜ್ವರ, ಕೆಮ್ಮು ನೆಗಡಿ ಸಾಮಾನ್ಯ, ಹಾಗಂತ ಹೆದರುವ ಅಗತ್ಯ ಇಲ್ಲ. ಆದ್ರೆ ಮಾಸ್ಕ್ ಧರಿಸುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಕೆಮ್ಮು, ನೆಗಡಿ, ಜ್ವರ ವಿಪರೀತ ಆದಾಗ ಸ್ವಯಂ ಚಿಕಿತ್ಸೆ ಪಡೆಯದೇ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.